ಪ್ಯಾಟೆಗೋನಿಯ-  ದಕ್ಷಿಣ ಅಮೆರಿಕದ ಅರ್ಜೆಂಟೀನ ರಾಜ್ಯದ ಇಡೀ ದಕ್ಷಿಣ ಭಾಗ ಬಹುಮಟ್ಟಿಗೆ ಮರುಭೂಮಿ.  ಪ್ಯಾಟಗೋನಿಯ (ಶಾಪಗ್ರಸ್ಥ ಭೂಮಿ) ಎಂಬುದು 16 ನೆಯ ಶತಮಾನದಲ್ಲಿ ಇಲ್ಲಿಯ ಕಡಲ ತೀರದಲ್ಲಿ ಸಂಚರಿಸಿದ ಪೋರ್ಚುಗೀಸ್ ನಾವಿಕ ಫರ್ಡಿನೆಂಡ್ ಮಜೆಲನ್ ಇಟ್ಟ ಹೆಸರು.  ಇಲ್ಲಿಯ ಮೂಲ ನಿವಾಸಿಗಳು ಸ್ಪ್ಯಾನಿಷ್ ಕಾದಂಬರಿಯೊಂದರಲ್ಲಿ ವರ್ಣಿತವಾಗಿರುವ ಶುನಕ ಶಿರದ ಭೂತವನ್ನು ಹೋಲುತ್ತಾರೆಂದು ಇವರ ನಾಡಿಗೆ ಈ ಹೆಸರು ಇಟ್ಟ.  ವಿಸ್ತೀರ್ಣ 6,73,000 ಚದರ ಕಿ.ಮೀ. ಉತ್ತರ ಹಾಗೂ ದಕ್ಷಿಣ ಅಮೆರಿಕ ಖಂಡಗಳಲ್ಲಿ ಅತ್ಯಂತ ದೊಡ್ಡದಾದ ಈ ಮರುಭೂಮಿ ಪ್ರದೇಶದ. ಅ. 370_ ಯಿಂದ ದ. ಆ. 510 ವರೆಗೆ ವ್ಯಾಪಿಸಿದೆ.  ಇದರ ಪಶ್ಚಿಮಕ್ಕೆ ಆಂಡೀಸ್ ಪರ್ವತಗಳು. ಉತ್ತರಕ್ಕೆ ಕಾಲರ್ಯಾಡೋ ನದಿ.  ಪೂರ್ವಕ್ಕೆ ಅಟ್ಲಾಂಟಿಕ್ ಸಾಗರ ; ದಕ್ಷಿಣಕ್ಕೆ ಕೊಹಿಗ್ ನದಿ ಇವೆ.  ಕಾಲರ್ಯಾಡೋ ನದಿಯ ಉತ್ತರಕ್ಕಿರುವ ಮೆಂಡೋಜû ಮತ್ತು ಪಂಪಾ ಪ್ರದೇಶಗಳು ಪ್ಯಾಟಗೋನಿಯ ಮರಳುಗಾಡು ಪ್ರದೇಶಕ್ಕೆ ಸೇರಿಲ್ಲ.  ಪ್ಯಾಟಗೋನಿಯ ಮರುಭೂಮಿಯೊಳಗಿನ ಅರ್ಜೆಂಟೇನ ಪ್ರಾಂತ್ಯಗಳು ನ್ಯೂ ಗ್ಯುಯೆನ್ ರೀಯೋ ನಾಗ್ರೋ, ಚೂಭಟ್ ಮತ್ತು ಸಾಂತಕ್ರೂಜ್ ದಕ್ಷಿಣ ಅಮೆರಿಕದ ದಕ್ಷಿಣ ತುದಿಯ ಟೈರಾಡೆಲ್ ಫೈಗೋ ದ್ವೀಪಗಳು ಈ ಮರುಭೂಮಿಯ ಭಾಗಕ್ಕೆ ಸೇರಿವೆ.

ಭೌತಲಕ್ಷಣ : ಪ್ಯಾಟಗೋನಿಯ ಮರುಭೂಮಿ ಆಂಡೀಸ್ ಪರ್ವತದಿಂದ ಅಟ್ಲಾಂಟಿಕ್ ಸಾಗರದವರೆಗಿನ ಸಮತಲ ಭೂಮಿಯನ್ನು ಆವರಿಸಿದೆ.  ಇದು ಹುಲ್ಲುಗಾಡು ಲಕ್ಷಣದ ಪ್ರದೇಶ.  ಕಾಡು ಮರಗಳು ಕಡಿಮೆ.  ಭೂಮಿ ಕಡಲ ತೀರದಿಂದ ಆಂಡೀಸ್ ಪರ್ವತದವರೆಗೆ ಮೆಟ್ಟಿಲು ಮೆಟ್ಟಲಾಗಿ ಏರಿದೆ.  ನಾಗ್ರೋ ನದಿಯ ಉದ್ದಕ್ಕೂ ಭೂಮಿ ಸಮುದ್ರ ಮಟ್ಟದಿಂದ 900 ಮೀ. ಎತ್ತರದಲ್ಲಿದೆ.  ಲೀಮೆ ಮತ್ತು ಮ್ಯೂಗ್ಯುಯನ ನದಿಗಳ ಸಂಗಮ ಸ್ಥಳದಲ್ಲಿ ಭೂಮಿ 400 ಮೀ. ಎತ್ತರಕ್ಕಿದೆ.  ನಾಗ್ರೋ ನದಿಯ ಪ್ರದೇಶ ಹೆಚ್ಚಾಗಿ ಸುರುಳಾಗಿದೆ. ಸಮುದ್ರ ಮಟ್ಟಕ್ಕೆ 1,500 ಮೀ. ಎತ್ತರ. ಅಲ್ಲಿ ಜೀವಂತ ಅಗ್ನಿಪರ್ವತಗಳಿವೆ.  ಅಗ್ನಿಶಿಲೆಯ ಪದರಗಳು ಬ್ಯಾನಸ್ ಏರಿಸ್ ಸರೋವರ ಮತ್ತು ಪ್ಯೂಯೆರೆಡಾನ್ ಭಾಗಗಳಲ್ಲಿ ಹರಡಿಕೊಂಡಿವೆ.  ಚೀಕೊ ಮತ್ತು ಸಾಂತಕ್ರೂಜ್ ನದಿಗಳ ಬಯಲು ಕಡಲಂಚಿಗೆ 50.80 ಕಿ.ಮೀ. ದೂರದಲ್ಲಿದೆ.  ಬೆಟ್ಟಗಳು ಚದರಿದಂತೆ ಅಲ್ಲಲ್ಲಿ ನಿಂತಿರುವುದು ಈ ಬಯಲು ಪ್ರದೇಶದ ವಿಶಿಷ್ಠ ಲಕ್ಷಣ.  ದಕ್ಷಿಣ ಅಟ್ಲಾಂಟಿಕ್ ಸಾಗರ ತೀರದಲ್ಲಿ ಪರ್ವತ ಚಾಚೂಗಳಿಗೂ ಸಮುದ್ರಕ್ಕೂ ನಡುವೆ ಇರುವ ಭೂಮಿ ಅಗ್ನಿಪರ್ವತಗಳಿಂದ ಹರಿದುಬಂದ ಶಿಲಾ ಪ್ರವಾಹ ಹಾಗೂ ಶಿಲೆಯ ಗಸ್ಟುಗಳಿಂದ ರೂಪಿತವಾಗಿದೆ.  
ಪ್ಯಾಟಗೋನಿಯದ ಕಡಿದಾದ ಹಾಗೂ ವಿಶಾಲವಾದ ಕಣಿವೆಗಳ ಸುತ್ತಲೂ ಬೆಟ್ಟಗಳು ಸಾಲುಗಟ್ಟಿವೆ.  ಪೂರ್ವಕಾಲದಲ್ಲಿ ಆಂಡೀಸ್ ಪರ್ವತಗಳಿಂದ ಇಳಿದು ಪೂರ್ವಕ್ಕೆ ಹರಿದು ಅಟ್ಲಾಂಟಿಕ್ ಸಾಗರಕ್ಕೆ ಬೀಳುತ್ತಿದ್ದ ನದಿಗಳ ಹರಿವನ್ನು ಈ ಬೆಟ್ಟಗಳು ತಡೆದ ಕಾರಣ ಆ ನದಿಗಳ ಆಯಕಟ್ಟಿನ ಪ್ರದೇಶಗಳು ಮಾತ್ರ ಈಗ ಕಾಣುತ್ತಿವೆ. ಆಂಡೀಸ್ ಪರ್ವತಗಳಿಂದ ಪ್ರಸ್ತುತ ಹರಿಯುತ್ತಿರುವ ನದಿಗಳು ಕಾಲರ್ಯಾಡೋ, ನಾಗ್ರೋ ಚೂಬಟ್, ಸೆನ್‍ಗ್ಯೂರ್, ಚೀಕೊ ಮತ್ತು ಸಾಂತಕ್ರೂಜ್ó ಷೆಹ್ಯೂನ್, ಕೊಯಿಗ್, ಗಾಲೆಗೊಸ್ ಮೊದಲಾದ ಕೆಲವು ಚಿಕ್ಕ ನದಿಗಳು ಮಳೆಗಾಲದಲ್ಲಿ ಮಾತ್ರ ಹರಿಯುತ್ತವೆ.  ಡೆಸಾಡೊ ಮುಂತಾದ ನದಿಗಳು ಪೂರ್ಣವಾಗಿ ಬತ್ತಿಹೋಗಿ ಅವುಗಳ ಜಲಾನಯನ ಭೂಮಿಯಲ್ಲಿ ಉಪ್ಪುನೀರಿನ ಗುಂಡಿಗಳು ಮಾತ್ರ ಇವೆ.  ಅವುಗಳ ನೀರು ಸುತ್ತಲ ಮೆಕ್ಕಲು ಮಣ್ಣಿನ ನೆಲದ ಬೇಸಾಯಕ್ಕೆ ಉಪಯುಕ್ತವಾದ್ದು, ಪ್ಯಾಟಗೋನಿಯದ ಕಣಿವೆಯ ಕಮರಿಗಳಲ್ಲಿ ಅನೇಕ ಸರೋವರಗಳಿವೆ.  ಅವುಗಳಲ್ಲಿ ಹುಟ್ಟಿ ಹರಿದ ನೀರ್ಗಲ್ಲ ನದಿಗಳು ತಂದು ಹಾಕಿರುವ ಮುರುಗಲ್ಲುಗುಪ್ಪೆಯ ರಾಶಿಗಳು ಬೆಟ್ಟದ ತಗ್ಗುಗಳಲ್ಲಿವೆ.  ಹೌಪೀ ಸರೋವರಕ್ಕೆ ಉತ್ತರಕ್ಕಿರುವ, ಲಾಕಾರ್ ಸರೋವರ ಹೊರತು ಉಳಿದೆಲ್ಲ ಸರೋವರಗಳಲ್ಲಿ ದಕ್ಷಿಣಕ್ಕಿರುವ ಸರೋವರಗಳ ಪೈಕಿ ಹುಟ್ಟುವ ನದಿಗಳೂ ಅಟ್ಲಾಂಟಿಕ್ ಸಾಗರವನ್ನು ಸೇರುತ್ತವೆ, ವಿಯೆಗ್‍ಮಾ ಮತ್ತು ಅರ್ಜಿಂಟೀನೊ ಸರೋವರಗಳ ಹೊರತು ಉಳಿದವುಗಳಲ್ಲಿ ಹುಟ್ಟಿದ ನದಿಗಳು ಆಂಡೀಸ್ ಪರ್ವತಗಳ ಮೂಲಕ ಪಶ್ಚಿಮಕ್ಕೆ ಹರಿದು ಪೆಸಿಫಿಕ್ ಸಾಗರವನ್ನು ಸೇರುತ್ತವೆ. 

ವಾಯುಗುಣ : ಪೆಸಿಫಿಕ್ ಸಾಗರದಿಂದ ಪೂರ್ವಕ್ಕೆ ಸಾಗಿಬರುವ ಆದ್ರ್ರ ವಾಯು ಆಂಡೀಸ್ ಪರ್ವತಗಳನ್ನು ದಾಟಿ ಪ್ಯಾಟಗೋನಿಯ ಮರುಭೂಮಿಗೆ ಬರುವ ಹೊತ್ತಿಗೆ ತನ್ನ ಆದ್ರತೆಯನ್ನು ಕಳೆದುಕೊಳ್ಳುತ್ತದೆ.  ವಾಯುಗುಣರೀತ್ಯ ಪ್ಯಾಟಗೋನಿಯ ಮರುಭೂಮಿಯನ್ನು ಉತ್ತರ ಮತ್ತು ದಕ್ಷಿಣ ವಲಯಗಳಾಗಿ ವಿಭಾಗಿಸಲಾಗಿದೆ.  1 ಉತ್ತರದ ವಲಯದಲ್ಲಿ ಅರೆಬಂಜರು ಭೂಮಿ ; ಇಲ್ಲಿ ವಾರ್ಷಿಕ ಗರಿಷ್ಠ ಉಷ್ಣತೆ 410 ಸೆ. 450 ಸೆ, ವಡುವೆ ಇರುತ್ತದೆ.  ವಾರ್ಷಿಕ ಮಳೆ 4" - 17" ನೈರುತ್ಯದಿಂದ ಬೀಸುವ ಗಾಳಿ ಶ್ರಾಯೀಣವಾಗಿ ತೀರ ಬೆಚ್ಚಗೆ ಇಲ್ಲವೆ ತೀರ ಶೀತಲವಾಗಿರುತ್ತದೆ.  2 ದಕ್ಷಿಣ ವಲಯದ ಆಂಡೀಸ್ ಪರ್ವತ ಶ್ರೇಣಿಯ ಬೆಚ್ಚನೆಯ ಹವೆಗೆ ಭಿನ್ನವಾದ್ದು.  ಸಮುದ್ರ ಮಟ್ಟಕ್ಕೆ ಎತ್ತರದ ಭೂಭಾಗಗಳಲ್ಲಿ ಪಶ್ಚಿಮದಿಂದ ಬೀಸುವ ಶೀತಗಾಳಿ ಹಾಗೂ ಫೌಕ್‍ಲೆಂಡ್ ದ್ವೀಪಗಳಿಂದ ಬರುವ ಶೀತ ಪ್ರವಾಹದಿಂದ ಈ ಪ್ರದೇಶ ಪ್ರಭಾವಿತವಾಗಿದೆ.  ಇವರ ದಕ್ಷಿಣಕ್ಕೆ ಅಟ್ಲಾಂಟಿಕ್ ಸಾಗರದ ವಾಯುಗುಣವಿದೆ.  ಅಲ್ಲಿಯ ಕರಾವಳಿ ಪ್ರದೇಶದಲ್ಲಿ ಉಷ್ಣತೆ ಅಧಿಕ.  ಒಳನಾಡಲ್ಲಿ ಪಶ್ಚಿಮದಿಂದ ಶೀತಗಾಳಿ ಬೀಸುತ್ತದೆ.  ವಾರ್ಷಿಕ ಗರಿಷ್ಠ ಉಷ್ಣತೆ ಸು. 420 ಸೆ. ಕನಿಷ್ಟ ಉಷ್ಣತೆ 90 ಸೆ. 330 ಸೆ. ಸರಾಸರಿ ವಾರ್ಷಿಕ ಮಳೆ 18" ಪ್ಯಾಟಗೋನಿಯ ಮಧ್ಯಭಾಗದ ಮರಳ್ಗಾಡಿನಲ್ಲಿ ಮಳೆ ಕಡಿಮೆ.  ಬಿಸಿಲಿನ ತಾಪ ಅಧಿಕ.

ಸಸ್ಯ ಪ್ರಾಣಿವರ್ಗ : ಪ್ಯಾಟಿಗೋನಿಯದ ಪಶ್ಚಿಮ ಅಂಚಿನ ಉದ್ದಕ್ಕೂ ಆಂಡೀಸ್ ಪರ್ವತಗಳಲ್ಲಿರುವಂಥ ಸಸ್ಯಗಳಿವೆ.  ಮರುಭೂಮಿಯನ್ನು ಉತ್ತರ ಮತ್ತು ದಕ್ಷಿಣ ಸಸ್ಯ ವಲಯಗಳಾಗಿ ವಿಭಜಿಸಲಾಗಿದೆ.  ಉತ್ತರ ಸಸ್ಯ ವಲಯದಲ್ಲಿ ನ್ಯೂಗ್ಯುಯೆನ್ ರೀಯೊ ನಾಗ್ರೋ ಪ್ರಾಂತ್ಯದ ಬಹುಭಾಗವೂ ಚೊಬಟ್ ಪ್ರಾಂತ್ಯದ ಉತ್ತರ ಭಾಗವೂ ಇವೆ.  ಈ ಸಸ್ಯ ವಲಯಕ್ಕೆ ಸೇರಿದ ಮರುಭೂಮಿಯ ವಿಸ್ತೀರ್ಣ ಸು. 3,40,00,000 ಹೆಕ್ಟೇರ್.  ಆ ಭಾಗದಲ್ಲಿ ಗಿಡ್ಡ ಮರಗಿಡಗಳೂ ಮತ್ತು ಪೊದೆಗಳೂ ಇವೆ.  ಹುಲ್ಲುಗಾಡು ಅಧಿಕ.  ನೀರಾವರಿಯಾಗುವ ಕಡೆಗಳಲ್ಲಿ ಪೀಚ್, ಪ್ಲೆಮ್, ದ್ರಾಕ್ಷಿ, ಖರ್ಜೂರ, ತರಕಾರಿ, ಅಲ್ಫಾಲ್ಫ ಮತ್ತು ಮೂಲಿಕೆಗಳು ಬೆಳೆಯುತ್ತವೆ.  ಕೆಲವು ಭಾಗಗಳಲ್ಲಿ ಕುರುಚಲು ವನಗಳಿಂದ ಕೂಡಿದ ಬೆಂಗಾಡುಗಳಿವೆ..  ದಕ್ಷಿಣ ಸಸ್ಯವಲಯಕ್ಕೆ ನ್ಯೂಗ್ಯೂಯೆನ್‍ರೀಯೊ ನಾಗ್ರೋ ಪ್ರಾಂತ್ಯದ ನೈರುತ್ಯಭಾಗ, ಚೂಬಟ್ ಪ್ರಾಂತ್ಯದ ಮುಕ್ಕಾಲು ಭಾಗ ಹಾಗೂ ಸಾಂತಕ್ರೂಜ್ ಪ್ರಾಂತ್ಯದ ಬಹುಭಾಗ ಸೇರಿವೆ.

      ಪ್ಯಾಟಗೋನಿಯದ ಸರೋವರಗಳಲ್ಲಿ ಹೆರಾನ್ ಮತ್ತು ಹಲವು ಜಲಚರ ಪಕ್ಷಿಗಳು ಇವೆ.  ಮರುಭೂಮಿಯ ಕಡೆಗಳಲ್ಲಿ ಹದ್ದು, ಡೇಗೆ, ಉಷ್ಟ್ರಪಕ್ಷಿ ಜಾತಿಯ ನಂಡು ಎಂಬ ಪಕ್ಷಿ ಇವೆ.  ಕಾಂಗರೂವಿನಂತೆ ಹೊಟ್ಟೆಯ ಚೀಲದಲ್ಲಿ ಮರಿಗಳನ್ನು ಇಟ್ಟುಕೊಳ್ಳುವ ಕೋಮದ್ರೆಜಾ, ಬಾವಲಿ, ನರಿ, ಸ್ಕಂಕ್, ಕಾಡು ಬೆಕ್ಕು ಪ್ಯೂಮ, ಮೊಲ, ಕ್ವಾನಾಕೋ ವಿಷಸರ್ಪಗಳು, ಆಮೆ ಇವೆ.  ಸರೋವರ ಹಾಗೂ ಸಮುದ್ರದಲ್ಲಿ ಮತ್ಸ್ಯ ಸಂಪತ್ತು ಹೇರಳವಾಗಿದೆ.

     ಜನ : ಪ್ಯಾಟಗೋನಿಯದ ಮೂಲನಿವಾಸಿಗಳು 5,000 ವರ್ಷಗಳ ಹಿಂದೆ ಟ್ಯೆರಾ ಡೆಲ್ ಪ್ಯೂಗೋ ದ್ವಿಪಗಳಿಂದ ಒಳನಾಡಿಗೆ ಬಂದು ನೆಲೆಸಿದವರು.  ಈ ಜನ ಎತ್ತರವಾಗಿ ದೃಢಕಾಯರಾದವರು.  ಅವರಲ್ಲಿ ಎರಡು ಬಣಗಳುಂಟು.  ಪ್ಯಾಟಗೋನಿಯದ ಉತ್ತರದಲ್ಲಿ ಜ್ಯಾಮನೀಚ್ ಪಂಗಡದ ಜನರೂ ದಕ್ಷಿಣದಲ್ಲಿ ಆಲಕಲು ಫೀಜ್ ಜನರೂ ವಾಸವಾಗಿದ್ದಾರೆ.  ಸ್ಪೇನ್ ದೇಶದ ಜನರು ಇಲ್ಲಿಗೆ ಬಂದಾಗ ಈ ಜನ ಬೇಟೆಯಾಡಿ ಜೀವಿಸುತ್ತಿದ್ದರು.  16 ನೆಯ ಶತಮಾನದ ಕೊನೆಯಲ್ಲಿ ಸ್ಪೇನ್ ನ ದೊರೆ ಪ್ಯಾಟಗೋನಿಯದ ಕಡಲ ತೀರದಲ್ಲಿ ವಸಾಹತುಗಳನ್ನು ಸ್ಥಾಪಿಸಿ ಇಂಗ್ಲಿಷ್ ಕಡಲ್ಗಳ್ಳರನ್ನು ಓಡಿಸಲು ಪ್ರಯತ್ನಿಸಿದ.  ಆದರೆ ಗಾಲ್ಫೊಸಾನ್ ಮಥೀಯಾಸ್ ಕೊಲ್ಲಿಯಲ್ಲಿ ಸ್ಥಾಪಿಸಿದ ಜೆಸುಯಿಟ್ ಪಾದ್ರಿಗಳ ವಸಾಹತು ಬಹಳ ಕಾಲ ಉಳಿಯಲಿಲ್ಲ  1778 ರಲ್ಲಿ ಇಂಗ್ಲಿಷರು ಅದೇ ಕೊಲ್ಲಿಯಲ್ಲಿ ನೆಲೆಸಿದಾಗ ಸ್ಟ್ಯಾನಿಷರು ಪ್ಯೆಪೋಟಿಯಿಂದ ಸಾನ್ ಹೋಸೆ ಮತ್ತು ವೈಡ್ಮಾ ನಗರಗಳನ್ನು ಸ್ಥಾಪಿಸಿದರು. ಪೈರ್ಟೊ ಡೆಸ್ಕಾಡೊ  ಎಂಬಲ್ಲಿ ಸ್ಥಾಪಿಸಿದ ಸಣ್ಣ ಸ್ಪ್ಯಾನಿಷ್ ವಸಾಹತು 1780 ರಿಂದ 1807 ರ ವರೆಗೆ ಅಸ್ತಿತ್ವದಲ್ಲಿತ್ತು.  ತರುವಾಯ ಅಲ್ಲಿಯ ಬೇರೆ ಕಡೆಗಳಿಗೆ ಚದರಿ ಹೋದರು. ಈ ಅರೆ ಮರುಭೂಮಿ ಭಾಗಗಳು ಜನವಾಸಕ್ಕೆ ಯೋಗ್ಯವಾಗಿರಲಿಲ್ಲ.  ಕೊಮೋ ದೊರೊ ರೀವಾದಾವಿಯಾ ಎಂಬಲ್ಲಿ ಹಾಗೂ ರೀಯೊ ನಾಗ್ರೋ ನದಿಯ ಉತ್ತರ ಕಣಿವೆಯ ಭಾಗಗಳಲ್ಲಿ ಹೆಚ್ಚು ಜನಸಂಖ್ಯೆಯ ಪಟ್ಟಣಗಳಿದ್ದರೂ ಪ್ಯಾಟಗೋನಿಯದ ಗ್ರಾಮಾಂತರ ಪ್ರದೇಶಗಳಲ್ಲಿ ಜನ ತೀರ ಕಡಿಮೆ.

ಖನಿಜಗಳು :  ಪ್ಯಾಟಗೋನಿಯದ ಪ್ರಧಾನ ಖನಿಜೋತ್ಪನ್ನ ಪೆಟ್ರೋಲ್, ಕೊಮೋಡೊರೊ ರೀವಾದಾವಿಯಾ, ಪ್ಲಾಜಾ ಹುಯೀನ್ನುಲ್ ಮುಂತಾದ ಕಡೆಗಳಲ್ಲಿ ಇದು ಹೆಚ್ಚಾಗಿ ಸಿಗುತ್ತದೆ.  ಸೀಯರಾ ಗ್ರ್ರಾಂಡೇ ಬೆಟ್ಟದ ಪ್ರದೇಶದಲ್ಲಿ ಕಬ್ಬಿಣ ಅದಿರು, ನ್ಯೂಗ್ಯೂಯೆನ್ ಪ್ರಾಂತ್ಯದಲ್ಲಿ ತಾಮ್ರ ಹಾಗೂ ಚಿನ್ನ ಸಿಗುತ್ತವೆ.

ಸಾರಿಗೆ ಸಂಪರ್ಕ : ಬ್ಯಾನಸ್ ಏರಿಸ್ ಸರೋವರದಿಂದ ಬಾಹೀಯಾ ಬ್ಲಂಗ್ಕಾರೇವಿನವರೆಗೆ ಕರಾವಳಿಯಲ್ಲಿ 2880 ಕಿ.ಮೀ. ದೂರದ ಅರ್ಜೆಂಟೀನಾದ 3 ನೆಯ ನಂಬರ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ.  ಮರುಭೂಮಿಯ ಕಡೆ ರಸ್ತೆಗಳು ಕಡಿಮೆ.  ಅವು ಉತ್ತಮವಾಗಿಲ್ಲ.  ಕರಾವಳಿಯಿಂದ ರೈಲು ಮಾರ್ಗಗಳು ಕಡಿಮೆ.  ಅವೂ ಉತ್ತಮವಾದವಲ್ಲ.  ರೈಲು ಮಾರ್ಗಗಳು ಪೂರ್ವದಿಂದ ಪಶ್ಚಿಮಕ್ಕೆ ಸಾಗಿವೆ.  ಕರಾವಳಿಯ ಪಟ್ಟಣಗಳಿಗೆ ವಿಮಾನ ಸೌಲಭ್ಯವಿದೆ.  ಮುಖ್ಯ ರೇವುಗಳು ರಾಸನ್, ಡೆಸೆಯಾಡೋ, ಸಾಂತಕ್ರೂಜ್, ಸಾನ್ ಆಂಟೋನಿಯೋ, ಸ್ಪೆಟ್ರೋಮದ್ರೈನ್, ಕಮರೊಗೀಸ್ ಮತ್ತು ಸಾನ್ ಜೂಲಿಯನ್.
(ವಿ.ಜಿ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ